ನೀಲಾಕಾಶದಲ್ಲಿ ಚಂದಿರನ ಕಂಡೊಡನೆ ಯಾಕೋ ನಿನ್ನೇ ಕಂಡಂತಾಯಿತು ನನಗೆ. ದೂರ ನಿಂತು ಮುಗುಳ್ನಗಲು, ನಿನ್ನ ತಂಪನೆಯ ನೆನಪು ಮಾಯದಂತೆ ಕಾಪಿಡಲು ಮಾತ್ರ ಗೊತ್ತು ನಿನಗೆ. ಬಳಿ ಬಂದು ನಿನ್ನ ತೋಳಿನಲ್ಲಿ ನನ್ನನ್ನು ಬಂಧಿಸಿ ಹಣೆಗೆ ಯಾವಾಗ ಮುತ್ತಿಕ್ಕುವೆಯೋ ಎಂದು ಕಾದು ಕುಳಿತಿರುವೆ ಗೆಳೆಯ. ನೀ ದೂರದ ಚಂದಿರನಾಗಬೇಡ. ನನ್ನ ಮುದ್ದಿನ ಇನಿಯನಾಗಿ ನನ್ನ ಜೊತೆಯಲ್ಲೇ ಇರು. ಪ್ಲೀಸ್ ಕಣೋ..
-ಮೆಹನಾzzz
No comments:
Post a Comment