ನಾ ಬರೆಯುವೆ...
ಬೆರಳು ನೋಯುತಿದ್ದರೂ,
ಈ ಪೆನ್ನಿನ ಜೀವ ಮುಗಿದರೂ,
ಹಗಲು ಮುಗಿದು ಇರುಳಾದರೂ,
ನಾ ಬರೆಯುವೆ...
ನಿನ್ನಿರವು ಕಾಣದಾದರೂ,
ಕನಸೆಲ್ಲ ಬತ್ತಿ ಹೋದರೂ,
ನನ್ನುಸಿರೇ ನಿಂತು ಬಿಟ್ಟರೂ,
ನಾ ಬರೆಯುವೆ...
ನೀ ಬರುವ ಆಕಾಂಕ್ಷೆಯೊಂದಿಗೆ,
ನಿನ್ನ ಸೇರುವ ಹಂಬಲದೊಂದಿಗೆ,
ನನ್ನ ಪ್ರತಿ ಬರಹವೂ ಕಾಣಿಕೆ ನಿನಗೆ.
-ಮೆಹನಾzzz
No comments:
Post a Comment